News & Events

ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ ಮಾನವ ಹಕ್ಕುಗಳ ಜಾಗೃತಿ ಜಾಥಾ ಸಪ್ತಾಹದ ಅಂಗವಾಗಿ ಬೀದಿ ನಾಟಕ ಪ್ರದರ್ಶನ

ದಿನಾಂಕ 19-02-2021 ರಂದು ಶುಕ್ರವಾರ ಅಪರಾಹ್ನ ಹರಿಹರ ಭೀಮನಗರ ಕಾಲನಿಯ ಬೀದಿಯಲ್ಲಿ ನಾಗರಿಕರಿಗೆ ನಮ್ಮ ಹಕ್ಕುಗಳ ಕುರಿತಂತೆ ಜಾಗೃತಿ ಮೂಡಿಸುವಂತಹ ನಿಟ್ಟಿನಲ್ಲಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು .ಮಹಿಳೆಯರು ಮಹನೀಯರು ಮಕ್ಕಳು ಸೇರಿದಂತೆ ಅಪಾರ ಜನಸ್ತೋಮದ ಮುಂದೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯ,ಅತ್ಯಾಚಾರ,ಅನಾಚಾರ,ದೌರ್ಜನ್ಯ,ಬಾಲ್ಯವಿವಾಹ ಹೆಣ್ಣಿನ ಶೋಷಣೆ ಮಾತ್ರವಲ್ಲದೆ ಶಿಕ್ಷಣದ ಮಹತ್ವ ಇತ್ಯಾದಿ ವಿಷಯಗಳನ್ನೊಳಗೊಂಡ ಅರ್ಥಪೂರ್ಣ ಬೀದಿ ನಾಟಕವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಾದರಪಡಿಸಿದರು.ನಮ್ಮ ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಭಿತ್ತಿಪತ್ರವನ್ನು ಪ್ರದರ್ಶಿಸುತ್ತಾ ಈ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಸಂವಿಧಾನಬದ್ಧವಾಗಿ ಪರಿಹರಿಸಲು ನಮಗೆ ಅವಕಾಶವಿದೆ ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಈ ಬೀದಿ ನಾಟಕ ಪ್ರದರ್ಶನದ ಸಂದರ್ಭ ಮಾನವ ಹಕ್ಕುಗಳ ಜಾಗೃತಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿರುವ ಕುಮಾರಿ ರಮ್ಯಶ್ರೀ , ಉಪಪ್ರಾಂಶುಪಾಲರಾದ ಕುಮಾರಿ ಪ್ರಿನ್ಸಿ ಫ್ಲಾವಿಯಾ , ಬೀದಿನಾಟಕ ಉಸ್ತುವಾರಿ ಉಪನ್ಯಾಸಕರಾದ ಶ್ರೀ ಅಬ್ದುಲ್ ರೆಹಮಾನ್,ಬ್ರದರ್ ರೋಯ್ಡನ್,ಶ್ರೀ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು .

ಉಸ್ತುವಾರಿ ಉಪನ್ಯಾಸಕರು (ಅಬ್ದುಲ್ ರೆಹಮಾನ್ )