News & Events

*ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ:*

ದಿನಾಂಕ 24-02-2021 ರಿಂದ 03-03-2021 ರ ವರೆಗೆ ಹರಿಹರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹರಿಹರದ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನಮುಡಿಗೇರಿಸಿಕೊಂಡಿದೆ.

*ಬಾಲಕರ ವಿಭಾಗದಲ್ಲಿ* : ಫುಟ್ಬಾಲ್ ಪ್ರಥಮ,ಹ್ಯಾಂಡ್ ಬಾಲ್ ಪ್ರಥಮ, ಶಟಲ್ ಬ್ಯಾಡ್ಮಿಂಟನ್ ಪ್ರಥಮ,ಟೆನಿಕಾಟ್ ಪ್ರಥಮ,ವಾಲಿಬಾಲ್ ಪ್ರಥಮ,ಥ್ರೋಬಾಲ್ ಪ್ರಥಮ, ಕಬಡ್ಡಿ ದ್ವಿತೀಯ,ಬಾಲ್ ಬ್ಯಾಡ್ಮಿಂಟನ್ ದ್ವಿತೀಯ.

*ಬಾಲಕಿಯರ ವಿಭಾಗದಲ್ಲಿ* : ಫುಟ್ಬಾಲ್ ಪ್ರಥಮ,ಟೆನಿಕಾಟ್ ಪ್ರಥಮ,ವಾಲಿಬಾಲ್ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ದ್ವಿತೀಯ, ಥ್ರೋಬಾಲ್ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. *ಅಥ್ಲೆಟಿಕ್ಸ್ ವಿಭಾಗದಲ್ಲಿ:* ಪ್ರದೀಪ್ ಯಾದವ್ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಹಾಗೂ ಅಖಿಲಾ ಎ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಾದ ಫಾ.ಎರಿಕ್ ಮಥಾಯಸ್, ವಸತಿ ನಿಲಯದ ನಿರ್ದೇಶಕರಾದ ಫಾ.ರಾಯಪ್ಪ,ಪ್ರಾಂಶುಪಾಲರಾದ ಬ್ಯಾಪ್ಟಿಸ್ಟ್ ಸನ್ನಿ ಗುಡಿನೊ,ಉಪ ಪ್ರಾಂಶುಪಾಲರಾದ ಪುಷ್ಪಲತಾ ಅರಸ್ ಹಾಗೂ ಪ್ರಿನ್ಸಿ ಫ್ಲಾವಿಯಾ ಪಿಂಟೊ,ದೈಹಿಕ ನಿರ್ದೇಶಕರಾದ ಮಂಜುನಾಥ್ ಟಿ ಎಸ್‌, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.